ಬಡ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣ ತಟ್ಟಿ ವೆಂಕೋಬರಾವ್ : ಹೆಚ್.ಮಲ್ಲಿಕಾರ್ಜುನ

Spread the love

ಹರಪನಹಳ್ಳಿ : ತಟ್ಟಿ ವೆಂಕೋಬರಾವ್ ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ, ಉಚಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಸಾಹಿತ್ಯ, ಸಂಗೀತ ಮತ್ತು ವಕೀಲ ವೃತ್ತಿಯಲ್ಲೂ ಸೇವೆಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಮನದಾಳದಲ್ಲಿ ಶಾಶ್ವತವಾಗಿ ನೆಲೆ ನಿಂತು ಉತ್ತಮ ಶಿಕ್ಷಕರೆನಿಸಿಕೊಂಡಿದ್ದಾರೆ ಎಂದು ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ಪಟ್ಟಣದ ಹಿಪ್ಪಿ ತೋಟದ ಧನ್ವಂತ್ರಿ ಕ್ಲಿನಿಕ್ ಹಾಲ್‌ನಲ್ಲಿ ನಡೆದ ತಟ್ಟಿ ವೆಂಕೋಬರಾವ್ ಇವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಳ, ಸಜ್ಜನ, ತಾಳ್ಮೆ ಮತ್ತು ಶಾಂತ ಮೂರ್ತಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಉಚಿತವಾಗಿ ಬೋಧಿಸುತ್ತಿದ್ದ ತಟ್ಟಿ ವೆಂಕೋಬರಾವ್ ಅವರ ಸೇವೆ ಸ್ಮರಣೀಯ ಎಂದರು.
ಎಪಿಎಂಸಿ ವರ್ತಕ ಸಂಜುಕುಮಾರ್ ಮಾತನಾಡಿ ಧಾರವಾಡಕ್ಕೆ ಉಳ್ಳವರು ಕೋಚಿಂಗ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ನನ್ನಂತ ಬಡವರಿಗೆ ಹರಪನಹಳ್ಳಿಯಲ್ಲಿಯೇ ಉಚಿತವಾಗಿ ವಿದ್ಯಾದಾನ ಮಾಡಿದ ಪುಣ್ಯಾತ್ಮರಾಗಿದ್ದಾರೆ. ಗುತ್ತಿಗೆದಾರರಾದ ತೋಟಪ್ಪ ಶೆಟ್ಟಿ ಮಾತನಾಡಿ ನಮ್ಮ ಮನೆಯಲ್ಲಿ ಎಲ್ಲರೂ ಡಾಕ್ಟರ್ ಮತ್ತು ಇಂಜಿನಿಯರ್ ಆಗಲು ಗುರುಗಳೇ ಕಾರಣ ಎಂದರು.
ಪಿಯುಸಿಯಲ್ಲಿ ತ್ರಿಷಾ ಎ.ಎಂ., ಅಲ್ತಾಫ್ ಎಂ.ಎಸ್ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಕೆ.ಸಿ ಸಾಗರ್, ಪ್ರತೀಕ್ ಎಂ.ಎಸ್. ಆಪ್ಸಾನ ಬಾನು, ಪ್ರತಿಭಾ ಪುರಸ್ಕಾರ ಪಡೆದರು. ಮುಖ್ಯ ಅತಿಥಿಗಳಾಗಿ ಪ್ರಸಾದ ಶಾಸ್ತಿç ನಿವೃತ್ತ ಪ್ರಾಚಾರ್ಯರು, ನಿವೃತ್ತ ಸೈನಿಕರಾದ ಶ್ರೀನಿವಾಸ ರಾವ್ ಗುರುಗಳ ಸೇವೆಯನ್ನು ಸ್ಮರಿಸಿದರು. ಅಧ್ಯಕ್ಷತೆಯನ್ನು ಡಾ.ಎ.ಮುರುಗೆಪ್ಪ ನಿವೃತ್ತ ಪ್ರಾಧ್ಯಾಪಕರು ವಹಿಸಿದ್ದರು. ಪುರಸಭಾ ಸದಸ್ಯ ಕಿರಣ್ ಶಾನುಬೋಗ್, ಉಪನ್ಯಾಸಕರಾದ ಷಣ್ಮಖ ಇಟಿಗಿ, ಎ.ವೀರನಗೌಡ, ಶಂಭುಲಿAಗಯ್ಯ ಹಿರೇಮಠ, ಡಾ|| ಅಂಬಿಕಾ, ಡಾ|| ವಿಶ್ವರಾಧ್ಯ, ಡಾ|| ಆನಂದಗೌಡ ಕಾರ್ಯಕ್ರಮದ ಆಯೋಜಕರಾದ ತಟ್ಟಿ ಇಂದಿರೇಶ ಮತ್ತು ಕುಟುಂಬ ವರ್ಗದವರು ಭಾಗವಹಿಸಿದ್ದರು. ಪ್ರಾರ್ಥನೆ ಶ್ರಾವಣಿ ಮತ್ತು ಸಂಗಡಿಗರು, ಸ್ವಾಗತ ಮತ್ತು ಪ್ರಾಸ್ಥಾವಿಕ ನುಡಿ ಭೀಮಪ್ಪ ಉಪನ್ಯಾಸಕರು, ನಿರೂಪಣೆ ಹೆಚ್.ಎಂ.ಕೋಟ್ರೇಶ್ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

Back To Top