ಹೊಸ ವರ್ಷದ ಸಂಕಲ್ಪಗಳು

Spread the love

ಹೊಸ ವರ್ಷದ ಸಂಕಲ್ಪಗಳು

ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಏನಾದರೊಂದು ಕಲಿಕೆಗೆ ಸಿದ್ದರಾಗಬೇಕು ಹೊಸ ವರ್ಷ, ಹೊಸ ಉತ್ಸಾಹ, ಹೊಸ ಚೈತನ್ಯ, ವಿಶ್ವಾಸ ತುಂಬಿ ಮುನ್ನಡೆಯಲು ಮತ್ತು ಹೊಸ ವರ್ಷವನ್ನು ಸಾರ್ಥಕವಾಗಿ ಸದ್ವಿನಿಯೋಗ ಮಾಡಿಕೊಂಡು ಸಾಧಿಸುವಲ್ಲಿ ನಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಡಂಡರೆ ನಮ್ಮ ಬದುಕು ಸುಂದರ, ಸುಖಮಯವಾಗುವುದು ಖಂಡಿತ.

ಆರೋಗ್ಯ : ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯಲ್ಲಿರುವುದೇ ಆರೋಗ್ಯ. ವಿಶ್ರಾಂತಿಯಿಲ್ಲದೆ ದುಡಿದು ಆರೋಗ್ಯ ಹಾನಿ ಮಾಡಿಕೊಂಡು ದುಡಿದ ಹಣವನ್ನು ಆಸ್ಪತ್ರೆಗೆ ಧಾರೆಯರೆಯುತ್ತಿದ್ದಾರೆ, ಎಷ್ಟೇ ಗಳಿಸಿದರೂ ಬಡವ ಶ್ರೀಮಂತ ಎಲ್ಲರಿಗೂ ಬೇಕಾರಿರುವುದು ತುತ್ತು ಅನ್ನ, ತುಂಡು ಬಟ್ಟೆ. ನಮಗಾಗಿ ಒಂದು ತಾಸು ಮೀಸಲಿಟ್ಟು ಆಟ-ಓಟ, ಯೋಗ, ವ್ಯಾಯಾಮ, ಏರೋಬಿಕ್ಸ್, ಜುಂಬಾ ಮುಂತಾದ ಇಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಸಮಯ ಪಾಲನೆ : “ಸಮಯ ಸಮುದ್ರದ ಅಲೆ ಯಾರನ್ನೂ ಕಾಯುವುದಿಲ.್ಲ” ಬದುಕಿನಲ್ಲಿ ಏನನ್ನಬೇಕಾದರೂ ಮತ್ತೆ ಪಡೆಯಬಹುದು ಆದರೆ ಕಳೆದು ಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಮಯವನ್ನು ಸೆಕೆಂಡುಗಲ್ಲಿ ತಿಳಿಯಬೇಕು. ಸಮಯದ ವ್ಯರ್ಥ ಹೇಗಾಗುತ್ತದೆ ಪಟ್ಟಿ ಮಾಡಿ ಹಾಳಾಗದಂತೆ ನೋಡಿಕೊಳ್ಳಬೇಕು. ಯಾವುದೇ ಕೆಲಸಕ್ಕೆ ಪುರಸೊತ್ತು ಸಿಗಲೆಂದು ಕಾಯಬಾರದು ಜೀವನಧ್ಯೇಯವನ್ನು ನಿರ್ಧರಿಸಿಕೊಂಡು ಕಾರ್ಯಪ್ರವೃತ್ತರಾಗಿ ಸಮಯದ ಸದುಪಯೋಗ ಪಡೆದುಕೊಳ್ಳಬೇಕು, ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ.

ಓದುವ ಹವ್ಯಾಸ : ನಮಗೆ ಪುಸ್ತಕವೇ ಅತ್ಯುತ್ತಮ ಸಂಗಾತಿ ನಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಲು ಅನೇಕ ಮಾರ್ಗಗಳಿವೆ, ಅವುಗಳಲ್ಲಿ ಮುಖ್ಯವಾದುದು ಓದು. ಓದಿನಿಂದ ವೈಯಕ್ತಿಕ ಜೀವನದಲ್ಲಿ ಲಾಭವಾಗುತ್ತದೆ. ಆಲೋಚನೆಗಳ ದಿಕ್ಕನ್ನು ಬದಲಿಸುತ್ತದೆ. ಪುಸ್ತಕಗಳು ಮತ್ತು ಪತ್ರಿಕೆಗಳು ಮಾನವೀಯ ಗುಣಗಳನ್ನು ಸೃಷ್ಠಿಸುತ್ತವೆ. ಆತ್ಮ ವಿಶ್ವಾಸ ಹೆಚ್ಚಿಸುತ್ತವೆ. ಪುಸ್ತಕಗಳು ಜೀವನದ ಆತ್ಮ ಸಂಗಾತಿಗಳಾಗಿವೆ. ಇದರಿಂದ ಮನಸ್ಸು ಪ್ರಪುಲ್ಲ, ಕುತೂಹಲ, ಸೃಜನ ಶೀಲತೆ, ಮನೋರಂಜನೆ ಮತ್ತು ನಮಗೆ ಬೇಕಾಗಿರುವ ಪ್ರಾಪಂಚಿಕ ಜ್ಞಾನ, ವ್ಯವಹಾರಿಕ ಜ್ಞಾನವನ್ನು ಪಡೆಯಲು, ಒತ್ತಡ ಕಡಿಮೆ ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು, ನಮ್ಮ ಆದಾಯ ಡಬಲ್ ಆಗಲು ಕಲಿಕೆ ತ್ರಿಬಲ್ ಆಗಬೇಕು.

ಸ್ವಾರ್ಥದಿಂದ ಸೇವೆಯೆಡೆಗೆ : “ಹುಟ್ಟಿದ್ದಕ್ಕೆ ಅಚ್ಚಳಿಯದ ಗುರುತೊಂದನ್ನು ಮಾಡು.” ಎನ್ನುವಂತೆ ನಮ್ಮ ಜೀವನದ ಉದ್ದೇಶವನ್ನು ಅರಿಯಬೇಕು. ಸ್ವಾರ್ಥ ಜೀವನವನ್ನು ಮಾಡುವುದಲ್ಲ, ನಮ್ಮಿಂದಾದ ಸೇವೆ ಈ ಸಮಾಜಕ್ಕೆ ಸಲ್ಲಬೇಕು ಆದುದರಿಂದ ಯಾವುದಾದರೂ ಸಂಘ-ಸAಸ್ಥೆಗೆ ಸದಸ್ಯರಾಗಿ ಚಟುವಟಿಕೆಯಿಂದಿರುವುದು, ಸಮಾಜ ಸೇವೆ ಮಾಡಿ, ಹುಟ್ಟಿದಕ್ಕೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು.

ನೀವೊಬ್ಬ ಅತ್ಯಂತ ವಿಶೇಷ ವ್ಯಕ್ತಿಯಾಗಲು : ನಿಮ್ಮ ರಹಸ್ಯಗಳನ್ನು ಯಾರಿಗೂ ಬಿಟ್ಟುಕೊಡಬಾರದು, ಸದಾ ಉಲ್ಲಾಸದಿಂದ ಆನಂದದಿAದಿರಬೇಕು. ಕೋಪ ಬೇಡವೆ ಬೇಡ. ಹಳೆಯ ದ್ವೇಶವನ್ನು ಮರೆತುಬಿಡಬೇಕು, ಸರಳ ಜೀವನ ಶ್ರೀಮಂತ ಬದುಕು ನಡೆಸಬೇಕು. ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ಬದುಕಬಾರದು, ಯಾವುದೇ ಓಳ್ಳೆಯ ಅವಕಾಶಗಳು ಸಿಕ್ಕರೆ ಬಿಡಬಾರದು, ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆ ಕೇಳಬೇಕು. ಸದಾ ಯಾವುದಾದರೂ ಒಳ್ಳೆಯ ಕೆಲಸದಲ್ಲಿ ಬ್ಯುಸಿಯಾಗಿರಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸ್ಪಷ್ಟ ಗುರಿ, ಛಲ, ಬದ್ದತೆಗಳೊಂದಿಗೆ ಜೀವನ ನಡೆಸಲು ಪ್ರಯತ್ನಿಸಬೇಕು. ಯಾವುದೆ ಅಡೆತಡೆಗಳು ಬಂದರು ಅಂಜದೆ ಅಳುಕದೆ ಬುದ್ದಿವಂತಿಕೆಯಿAದ ಮುನ್ನುಗ್ಗಬೇಕು. ಸದಾ ಆತ್ಮವಿಶ್ವಾಸದಿಂದಿರಬೇಕು. ಆಗಲ್ಲ ಎನ್ನುವ ಶಬ್ದ ನಮ್ಮ ಕನಸಿನಲ್ಲೂ ಬರುವುದು ಬೇಡ, ಸವಾಲು, ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗಬೇಕು. ಯಾಕೆಂದರೆ ಇವುಗಳಿಲ್ಲದಿದ್ದರೆ ಜೀವನ ಬೋರು ಹೊಡೆದು ಸಾಯೋದು ಗ್ಯಾರಂಟಿ. ಸದಾ ನಕ್ಕು ನಗಿಸುವುದನ್ನು ಕಲಿತರೆ ನೀವೊಬ್ಬ ಅತ್ಯಂತ ವಿಶೇಷ ವ್ಯಕ್ತಿಯಾಗುವುದರಲ್ಲಿ ಅನುಮಾನವಿಲ್ಲ.

ವಾರ್ಷಿಕ ಬಜೆಟ್ : ಪ್ರತಿಯೊಬ್ಬರೂ ಕುಟುಂಬಕ್ಕೆ ಸಂಬAಧಿಸಿದAತೆ ವಾರ್ಷಿಕ ಬಜೆಟ್ ಆದಾಯ ಮತ್ತು ಖರ್ಚಿನ ಪಟ್ಟಿ(ಆಹಾರ, ಬಾಡಿಗೆ, ಬಟ್ಟೆ, ಶಿಕ್ಷಣ, ಆರೋಗ್ಯ, ಉಳಿಕೆ, ಮತ್ತು ಹೂಡಿಕೆ) ತಯಾರಿಸಿಕೊಂಡು ಅದರಂತೆ ಲೆಕ್ಕಾಚಾರ ಹಾಕಿ ಇದ್ದುದ್ದರಲ್ಲೆ ಜೀವನ ನಡೆಸಬೇಕು. ಸಾಲ ಮಾಡಿ ಶ್ರೀಮಂತಿಕೆಯ ಬದುಕು ಸರಿಯಲ್ಲ ಇಂದು ಸಾಲವಿಲ್ಲದವನೆ ಸಾಹುಕಾರ. ಈ ರೀತಿ ಜೀವನ ನಡೆಸಿದರೆ ಜೀವನದಲ್ಲಿ ನೆಮ್ಮದಿ ಶತಸಿದ್ದ.

ಹೊಸತು ಪ್ರಾರಂಭಿಸಿ : ವ್ಯಾಪಾರ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ, ಈಜು, ವಾಹನ ಚಾಲನೆ ಕಲಿಕೆ, ಶೈಕ್ಷಣಿಕ ತರಬೇತಿ, ವ್ಯಾಪಾರ, ಸಂಗೀತ, ನೃತ್ಯ, ಕಂಪ್ಯೂಟರ್ ಕಲಿಕೆ, ಸಾಹಿತ್ಯ ರಚನೆ ಮುಂತಾದ ನಿಮಗಿಷ್ಟವಾದ ಅನುಕೂಲವಾದ ಕಲಿಕೆ ನಿಮ್ಮಿಂದ ಸಾಧ್ಯವಾದ ಕಲಿಕೆ ಪ್ರಾರಂಭವಾಗಲಿ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಏನನ್ನೇ ಆಗಲಿ ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ. ವಯಸ್ಸು ಕೇವಲ ನಂಬರ್ ಅಷ್ಟೇ ಯಾರುಬೇಕಾದರೂ ಏನನ್ನಬೇಕಾದರೂ ಕಲಿಯಬಹುದು, ಏನನ್ನಾದರು ಮಾಡಿದರೆ ಏನಾದರೂ ಆಗುತ್ತದೆ. ಏನೂ ಮಾಡದಿದ್ದರೆ ಏನೂ ಅಗುವುದಿಲ್ಲ. ಆದುದರಿಂದ ಏನೇ ಆಗಲಿ ಕಲಿತು ಸಾಧಿಸಬಹುದು ಮನಸ್ಸು ಮಾಡಿ ಅಷ್ಟೆ. ನಿಮ್ಮಿಂದ ಎಲ್ಲವೂ ಸಾಧ್ಯ.. ಬದಲಾಗಲಿ ದಿನಚರಿ, ನನಸಾಗಲಿ ಸವಿಗನಸುಗಳು, ನಗು ನಗುತಾ ಬಾಳೋಣ, ಇತರರಿಗೂ ಸಂತೋಷ ಹಂಚೋಣ.

ಹೆಚ್.ಮಲ್ಲಿಕಾರ್ಜುನ ಹರಪನಹಳ್ಳಿ ೯೪೪೮೧೮೮೨೮೧

Leave a Reply

Your email address will not be published. Required fields are marked *

Back To Top