೭-೫-೨೦೨೪ ರಂದು ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಮಾಣ ಕರ್ನಾಟಕದಲ್ಲಿ ೭೦% ಆಗಿದೆ. ಇದು ಅತ್ಯಂತ ಕಡಿಮೆ. ಶೇ. ೧೦೦% ಮತದಾನವಾಗಬೇಕು. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲವೂ ಆನ್ ಲೈನ್ ನಲ್ಲಿ ಸಿಗುವಾಗ ಮತದಾನ ಮಾಡುವ ಪದ್ದತಿ ಮಾತ್ರ ಆನ್ ಲೈನ್ ನಲ್ಲಿ ಯಾಕೆ ಆಗುತ್ತಿಲ್ಲ? ನಮಗೆ ಚಂದ್ರಲೋಕ ಗೊತ್ತು ಆದರೆ ತಂತ್ರಜ್ಞಾನವನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಮತದಾನ ಮಾಡುವ ಪದ್ಧತಿಯನ್ನು ಜಾರಿಗೆ ತರಬೇಕು. ಆಗ ಮಾತ್ರ ಶೇ. ೧೦೦% ಮತದಾನವಾಗಬಹುದು. ಕೆಲಸಕ್ಕಾಗಿ ದೂರದೂರಿಗೆ ಕೂಲಿ ಹೋಗಿರುವ ಕಾರ್ಮಿಕರು, ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬಂದು ಮತಚಲಾಯಿಸಲು ಸಾಧ್ಯವಾಗುತ್ತಿಲ್ಲ. ಬಡವರು ಸಾವಿರಾರು ರೂಪಾಯಿ ವ್ಯಯಮಾಡಿಕೊಂಡು ಬರಲಾರದೆ ಮತದಾನದಿಂದ ದೂರ ಉಳಿಯುತ್ತಾರೆ. ಅಂತವರಿಗೆ ತಾವಿರುವ ಸ್ಥಳದಲ್ಲಿರುವ ಮತಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಆಧಾರದ ಮೇಲೆ ಮತ ಚಲಾಯಿಸುವಂತಾಗಬೇಕು. ಇದರಿಂದ ಹಣ, ಶ್ರಮ, ಸಮಯ ಎಲ್ಲವೂ ಉಳಿತಾಯವಾಗುತ್ತದೆ. ಒಂದು ವೇಳೆ ಹಾಗೂ ಮತದಾನ ಮಾಡದಿದ್ದರೆ, ಅಂತವರಿಗೆ ಸಕಾರದ ಯಾವುದೇ ಮೂಲ ಸೌಲಭ್ಯ ನೀಡಬಾರದು.
ಹೆಚ್.ಮಲ್ಲಿಕಾರ್ಜುನ ಹರಪನಹಳ್ಳಿ