Author: Mallikarjuna H

ಹರಪನಹಳ್ಳಿ: ಕನ್ನಡ ರತ್ನ ಪ್ರಶಸ್ತಿ ಪ್ರದಾನ

ಹರಪನಹಳ್ಳಿ: ಕನ್ನಡ ರತ್ನ ಪ್ರಶಸ್ತಿ ಪ್ರದಾನ ಕನ್ನಡ ಭಾಷೆ ಹೆಚ್ಚು ಶ್ರೀಮಂತವಾಗಿದೆ – ಹೆಚ್ ಮಲ್ಲಿಕಾರ್ಜುನ ಅಭಿಮತ ಹರಪನಹಳ್ಳಿ: ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಹೆಚ್ಚು ಶ್ರೀಮಂತವಾಗಿದೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ಎಸ್ ಯು ಜೆ ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ೨೦೨೩-೨೪ ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ […]

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ಕನ್ನಡ ರತ್ನ” ಪ್ರಶಸ್ತಿ ಪ್ರದಾನ

ಹರಪನಹಳ್ಳಿ : ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ (ಕನ್ನಡ ಮಾಧ್ಯಮ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನ್ನಡ ವಿಷಯದಲ್ಲಿ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮತ್ತು ೧೨೪, ೧೨೩, ೧೨೨, ೧೨೧, ೧೨೦ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ “ಕನ್ನಡ ರತ್ನ” ಪ್ರಶಸ್ತಿ ನೀಡಿ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ಶಾಲು, ಕಿರೀಟ, ಕನ್ನಡ ಪುಸ್ತಕ ನೀಡಿ ಹೂಮಳೆಗರೆದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಕನ್ನಡ […]

ಬಡ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣ ತಟ್ಟಿ ವೆಂಕೋಬರಾವ್ : ಹೆಚ್.ಮಲ್ಲಿಕಾರ್ಜುನ

ಹರಪನಹಳ್ಳಿ : ತಟ್ಟಿ ವೆಂಕೋಬರಾವ್ ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ, ಉಚಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಸಾಹಿತ್ಯ, ಸಂಗೀತ ಮತ್ತು ವಕೀಲ ವೃತ್ತಿಯಲ್ಲೂ ಸೇವೆಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಮನದಾಳದಲ್ಲಿ ಶಾಶ್ವತವಾಗಿ ನೆಲೆ ನಿಂತು ಉತ್ತಮ ಶಿಕ್ಷಕರೆನಿಸಿಕೊಂಡಿದ್ದಾರೆ ಎಂದು ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು. ಪಟ್ಟಣದ ಹಿಪ್ಪಿ ತೋಟದ ಧನ್ವಂತ್ರಿ ಕ್ಲಿನಿಕ್ ಹಾಲ್‌ನಲ್ಲಿ ನಡೆದ ತಟ್ಟಿ ವೆಂಕೋಬರಾವ್ ಇವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಳ, ಸಜ್ಜನ, ತಾಳ್ಮೆ ಮತ್ತು ಶಾಂತ […]

೧೦೦% ಮತದಾನವಾಗಲು

೭-೫-೨೦೨೪ ರಂದು ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಮಾಣ ಕರ್ನಾಟಕದಲ್ಲಿ ೭೦% ಆಗಿದೆ. ಇದು ಅತ್ಯಂತ ಕಡಿಮೆ. ಶೇ. ೧೦೦% ಮತದಾನವಾಗಬೇಕು. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲವೂ ಆನ್‌ ಲೈನ್‌ ನಲ್ಲಿ ಸಿಗುವಾಗ ಮತದಾನ ಮಾಡುವ ಪದ್ದತಿ ಮಾತ್ರ ಆನ್‌ ಲೈನ್‌ ನಲ್ಲಿ ಯಾಕೆ ಆಗುತ್ತಿಲ್ಲ? ನಮಗೆ ಚಂದ್ರಲೋಕ ಗೊತ್ತು ಆದರೆ ತಂತ್ರಜ್ಞಾನವನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಮತದಾನ ಮಾಡುವ ಪದ್ಧತಿಯನ್ನು ಜಾರಿಗೆ ತರಬೇಕು. ಆಗ ಮಾತ್ರ ಶೇ. ೧೦೦% ಮತದಾನವಾಗಬಹುದು. ಕೆಲಸಕ್ಕಾಗಿ ದೂರದೂರಿಗೆ ಕೂಲಿ ಹೋಗಿರುವ ಕಾರ್ಮಿಕರು, […]

ಪಿ ಯು ಸಿ ವಿದ್ಯಾರ್ಥಿಗಳಿಗೆ ಕನ್ನಡ ರತ್ನ

ಪಿಯುಸಿ ವಿದ್ಯಾರ್ಥಿಗಳಿಗೆ “ಕನ್ನಡ ರತ್ನ” ಪ್ರಶಸ್ತಿಗೆ ಅರ್ಜಿ ಆಹ್ವಾನ ಹರಪನಹಳ್ಳಿ :  ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಕಳೆದ ೨೬ ವರ್ಷಗಳಿಂದ ಸಮಾಜ ಸೇವೆ ಮತ್ತು ಕನ್ನಡದ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದು, ಪ್ರಸ್ತುತ ೨೦೨೩-೨೪ ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ “ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.  ಪಿಯುಸಿ ಪರೀಕೆಯಲ್ಲಿ ಕನ್ನಡ ವಿಷಯದಲ್ಲಿ ೯೫ ಕ್ಕೂ ಹೆಚ್ಚು ಅಂಕಗಳನ್ನು ಪಡೆದು […]

ಕನ್ನಡ ಶಾಲೆಗಳ ಸ್ಥಿತಿ-ಗತಿ-ಪರಿಹಾರ

ದಾವಣಗೆರೆ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹರಿಹರ. ದಿನಾಂಕ : ೧೮ ಮತ್ತು ೧೯ ಮಾರ್ಚ್ ೨೦೨೪ ವಿಶೇಷ ಉಪನ್ಯಾಸ : ಹೆಚ್.ಮಲ್ಲಿಕಾರ್ಜುನ, ಪ್ರಾಚಾರ್ಯರು, ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜು, ಹರಪನಹಳ್ಳಿ, ವಿಜಯನಗರ ಜಿಲ್ಲೆ. ೯೪೪೮೧೮೮೨೮೧ ಕನ್ನಡ ಶಾಲೆಗಳ ಸ್ಥಿತಿ-ಗತಿ-ಪರಿಹಾರ ಖಾಸಗೀಕರಣದ ನೆಪದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ನಲುಗುತ್ತಿದ್ದು, ಪಾಲಕ ಪೋಷಕರು ಆಂಗ್ಲ ಭಾಷೆಯ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕನ್ನಡ ಶಾಲೆಗಳು ಕೆಲವೆಡೆ ಮುಚ್ಚುವ ಹಂತಕ್ಕೆ ಬಂದಿವೆ. ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳಲ್ಲಿ ಹೆಚ್ಚುವರಿ […]

ಗುರು ಪರಂಪರೆ ಮತ್ತು ಗುರು ಶಿಷ್ಯರ ಬಾಂಧವ್ಯ

ಗುರು ಪರಂಪರೆ ಮತ್ತು ಗುರು ಶಿಷ್ಯರ ಬಾಂಧವ್ಯ ‘ಹರ ಮುನಿದರೂ ಗುರು ಕಾಯ್ವನು’ ಎನ್ನುವ ನಾಣ್ಣುಡಿ ಸತ್ಯವಾಗಿದೆ, ಋಷಿ ಮುನಿಗಳು ಆಶ್ರಮಗಳಲ್ಲಿ ನೆಲೆಸಿ ಗುರುಕುಲಗಳನ್ನು ನಡೆಸುತ್ತಾ ವಿದ್ಯಾ ದಾನ ಮಾಡುತ್ತಿದ್ದರು. ಇಂದು ಗುರುಕುಲಗಳು ಮಾಯವಾಗಿ ಶಾಲಾ ಕಾಲೇಜುಗಳಾಗಿ, ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಎಲ್ಲಾ ಧರ್ಮಗಳಲ್ಲಿಯೂ ಗುರು ಶಿಷ್ಯರ ಆಧ್ಯಾತ್ಮಿಕ ಸಂಬAಧ, ಮಾರ್ಗದರ್ಶನ, ಸಂಪ್ರದಾಯ ಮತ್ತು ಬೋಧನೆಗಳು ಗುರುವಿನಿಂದ ಶಿಷ್ಯನಿಗೆ ನೀಡಲಾಗುತ್ತದೆ. ಕೆಲವೊಂದು ವಿಶಿಷ್ಟ ತಂತ್ರಗಳಿAದ ವಿದ್ಯಾರ್ಥಿಯ ಯೋಗ್ಯತೆಯನ್ನು ಚನ್ನಾಗಿ ಪರೀಕ್ಷಿಸಿ ಬೋಧಿಸುತ್ತಿದ್ದರು. ಗುರುವಿಗೆ ಇಷ್ಟೇ ಬೋಧನಾ ಶುಲ್ಕ […]

ಹೊಸ ವರ್ಷದ ಸಂಕಲ್ಪಗಳು

ಹೊಸ ವರ್ಷದ ಸಂಕಲ್ಪಗಳು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಏನಾದರೊಂದು ಕಲಿಕೆಗೆ ಸಿದ್ದರಾಗಬೇಕು ಹೊಸ ವರ್ಷ, ಹೊಸ ಉತ್ಸಾಹ, ಹೊಸ ಚೈತನ್ಯ, ವಿಶ್ವಾಸ ತುಂಬಿ ಮುನ್ನಡೆಯಲು ಮತ್ತು ಹೊಸ ವರ್ಷವನ್ನು ಸಾರ್ಥಕವಾಗಿ ಸದ್ವಿನಿಯೋಗ ಮಾಡಿಕೊಂಡು ಸಾಧಿಸುವಲ್ಲಿ ನಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಡಂಡರೆ ನಮ್ಮ ಬದುಕು ಸುಂದರ, ಸುಖಮಯವಾಗುವುದು ಖಂಡಿತ. ಆರೋಗ್ಯ : ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯಲ್ಲಿರುವುದೇ ಆರೋಗ್ಯ. ವಿಶ್ರಾಂತಿಯಿಲ್ಲದೆ ದುಡಿದು ಆರೋಗ್ಯ ಹಾನಿ ಮಾಡಿಕೊಂಡು ದುಡಿದ ಹಣವನ್ನು ಆಸ್ಪತ್ರೆಗೆ ಧಾರೆಯರೆಯುತ್ತಿದ್ದಾರೆ, ಎಷ್ಟೇ ಗಳಿಸಿದರೂ ಬಡವ […]

Back To Top