ಹೊಸ ವರ್ಷದ ಸಂಕಲ್ಪಗಳು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಏನಾದರೊಂದು ಕಲಿಕೆಗೆ ಸಿದ್ದರಾಗಬೇಕು ಹೊಸ ವರ್ಷ, ಹೊಸ ಉತ್ಸಾಹ, ಹೊಸ ಚೈತನ್ಯ, ವಿಶ್ವಾಸ ತುಂಬಿ ಮುನ್ನಡೆಯಲು ಮತ್ತು ಹೊಸ ವರ್ಷವನ್ನು ಸಾರ್ಥಕವಾಗಿ ಸದ್ವಿನಿಯೋಗ ಮಾಡಿಕೊಂಡು ಸಾಧಿಸುವಲ್ಲಿ ನಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಡಂಡರೆ ನಮ್ಮ ಬದುಕು ಸುಂದರ, ಸುಖಮಯವಾಗುವುದು ಖಂಡಿತ. ಆರೋಗ್ಯ : ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯಲ್ಲಿರುವುದೇ ಆರೋಗ್ಯ. ವಿಶ್ರಾಂತಿಯಿಲ್ಲದೆ ದುಡಿದು ಆರೋಗ್ಯ ಹಾನಿ ಮಾಡಿಕೊಂಡು ದುಡಿದ ಹಣವನ್ನು ಆಸ್ಪತ್ರೆಗೆ ಧಾರೆಯರೆಯುತ್ತಿದ್ದಾರೆ, ಎಷ್ಟೇ ಗಳಿಸಿದರೂ ಬಡವ […]